Skip to main content

Posts

Showing posts with the label Kannada

ಅಜ್ಮೀರ್ ದರ್ಗಾ ಶರೀಫ್

 ಅಜ್ಮೀರ್ ದರ್ಗಾ ಶರೀಫ್ ಮುಸ್ಲಿಮರ ಪವಿತ್ರ ಯಾತ್ರಾ ಸ್ಥಳಗಳಲ್ಲಿ ಒಂದು.   ಇದನ್ನು ಸುಮಾರು ಹದಿಮೂರನೆಯ ಶತಮಾನದಲ್ಲಿ ಮೊಘಲ್ ಚಕ್ರವರ್ತಿ ಹುಮಾಯೂನ್ ನಿರ್ಮಿಸಿದನು. ಬುಲಂದ್ ದರ್ವಾಜಾ ಎಂದು ಕರೆಯಲ್ಪಡುವ ದೈತ್ಯ ದ್ವಾರದ ಮೂಲಕ ನೀವು ಇದನ್ನು ಪ್ರವೇಶಿಸಬಹುದು. ಅಮೃತಶಿಲೆಯಿಂದ ಕೆತ್ತಿದ ಮೊಯಿನುದ್ದೀನ್ ಚಿಸ್ತಿಯ ಸಮಾಧಿಯನ್ನು ನೋಡಬಹುದು .ಇದು ಮೇಲ್ಭಾಗದಲ್ಲಿ ಚಿನ್ನದ ಲೇಪನವನ್ನು ಹೊಂದಿದ್ದು ಅಮೃತಶಿಲೆಯಿಂದ ಇದನ್ನು ರಕ್ಷಿಸಲ್ಪಟ್ಟಿದೆ . ದರ್ಗಾವು ಗೋರಿ ಪ್ರಾಂಗಣ ಗಳಂತಹ ವಿವಿಧ ವಲಯಗಳನ್ನು ಹೊಂದಿದೆ. ನಿಜಾಂ ಗೇಟ್, ಜುಮ್ಮಾ ಮಸೀದಿ, ಬುಲಂದ್ ದರ್ವಾಜಾ ಔಲಿಯಾ ಮಸೀದಿ ಹೀಗೆ ಸುಮಾರು 12 ಇತರ ಪ್ರಮುಖ ಸಂಸ್ಥೆಗಳನ್ನು ಗಮನಿಸಬಹುದು.  ಇಲ್ಲಿನ ಒಂದು ಪ್ರಸಿದ್ಧ ಆಚರಣೆಯ ಬಗ್ಗೆ ಹೇಳಲೇಬೇಕು. ಅಜ್ಮೀರ್ ದರ್ಗಾದಲ್ಲಿ ಉರುಸ್ ಎಂಬ ಸುಂದರವಾದ ಆಚರಣೆಯನ್ನು ನಡೆಸಲಾಗುತ್ತದೆ. ಲಕ್ಷಾಂತರ ಜನರು ಪಾಲ್ಗೊಳ್ಳುವ ಇದನ್ನು ಇಸ್ಲಾಮಿಕ್ ಕ್ಯಾಲೆಂಡರ್ ನ ಏಳನೇ ತಿಂಗಳಲ್ಲಿ ಬಹಳ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಸಾಮಾನ್ಯವಾಗಿ ಪ್ರತಿ ರಾತ್ರಿಯಲ್ಲಿ ಮುಚ್ಚಲ್ಪಡುವ ಮುಖ್ಯದ್ವಾರವು ಈ ಆರೂ ದಿನದಂದು ಹಗಲು ಮತ್ತು ರಾತ್ರಿ ತೆರೆದಿರುತ್ತದೆ . ಸದಸ್ಯರು ನಗರದ ಮೂಲಕ ನಿಜಾಮ್ ಗೇಟ್ ಕಡೆಗೆ ಮೆರವಣಿಗೆ ಮಾಡುತ್ತಾರೆ ಮತ್ತು ಬುಲಂದ್ ದರ್ವಾಜಾ ದಲ್ಲಿ ಧ್ವಜವನ್ನು ಹಾರಿಸಲಾಗುತ್ತದೆ .ಪವಿತ್ರ ದೇಗುಲಕ್ಕೆ ಭೇಟಿ ನೀಡಲು ಇದು ವಿಶೇಷ ಸಮಯವಾಗಿದ್ದು ವರ್ಣರಂಜಿತ ಅ

ಸೂಫೀ ಶಹೀದ್ (ರ.ಅ) ಎಮ್ಮೆಮಾಡು, ಕೊಡಗು.

 ಕೊಡಗು ಎಂದ ತಕ್ಷಣ ನೆನಪಾಗುವುದು ಬೆಟ್ಟ, ಗುಡ್ಡ, ನದಿ, ತೊರೆ, ಕಾಡು, ಹಳ್ಳ, ಕೊಳ್ಳಗಳಿಂದಾವೃತವಾದ ನಿತ್ಯ ಹರಿದ್ವರ್ಣದ ವನಗಳಿಂದ ಕಂಗೊಳಿಸುವ ಪ್ರಕೃತಿ ಸೌಂದರ್ಯ. ಮಲೆನಾಡಿನ ಮಡಿಲೆಂದೇ ಬಣ್ಣಿಸಲ್ಪಡುವ ಕೊಡಗಿನಾದ್ಯಂತ ಮಳೆಗಾಲದಲ್ಲಿ ಅಲ್ಲಲ್ಲಿ ಸೃಷ್ಟಿಯಾಗುವ ಸಣ್ಣ ಸಣ್ಣ ಜಲಪಾತಗಳು ಹಾಗೂ ಚಳಿಗಾಲದ ಮಂಜು ಮುಸುಕಿದ ವಾತಾವರಣವು ಕೊಡಗಿಗೆ ಹೆಚ್ಚಿನ ಮೆರುಗನ್ನು ನೀಡಿರುತ್ತದೆ. ಹಾಗೆ ನಿಸರ್ಗದ ಚೆಲುವನ್ನೆಲ್ಲ ತನ್ನ ಮಡಿಲಲ್ಲಿ ಹುದುಗಿಸಿಕೊಂಡಿರುವ ಕೊಡಗು, ಇಸ್ಲಾಮಿಕ್ ಇತಿಹಾಸದ ಪುಟಗಳಲ್ಲಿ ದಾಖಲಾಗಿರುವ ಸೂಫೀ ಶಹೀದ್ (ರ) ಎಂಬ ಸೂಫಿವರ್ಯರ ತ್ಯಾಗ ಮತ್ತು ಬಲಿದಾನಕ್ಕೆ ಸಾಕ್ಷಿಯಾಗಿ ವಿಶ್ವಾಸಿ ಸಮೂಹಕ್ಕೆ ಆದ್ಯಾತ್ಮಿಕ ಅನುಭೂತಿಯನ್ನೂ ನೀಡುತ್ತಿರುವ ಸ್ಥಳವಾಗಿದೆ. ಕೊಡಗಿನ ಎಮ್ಮೆಮಾಡು ಎಂಬ ಸ್ಥಳದಲ್ಲಿರುವ ಮಖಾಮಿನಲ್ಲಿ ಅಂತ್ಯ ವಿಶ್ರಮ ಪಡೆಯುತ್ತಿರುವ ಸೂಫೀ ಶಹೀದ್ (ರ) ಎಂಬ ಸೂಫೀವರ್ಯರೇ ಕೊಡಗಿನ ಪ್ರಕೃತಿ ಸೌಂದರ್ಯಕ್ಕೆ ಆಧ್ಯಾತ್ಮದ ಮೆರುಗನ್ನು ನೀಡಿದ ಮಹಾನರಾಗಿದ್ದಾರೆ. ಸುಮಾರು ಮೂರೂವರೆ ಶತಮಾನಗಳ ಹಿಂದೆ ಪರಿಶುದ್ಧ ಇಸ್ಲಾಮಿನ ದಿವ್ಯ ಸಂದೇಶದೊಂದಿಗೆ ಇಲ್ಲಿಗಾಗಮಿಸಿದ ಈ ಮಹಾನರ ಪಾದಸ್ಪರ್ಶದಿಂದ ಪುನೀತವಾದ ನಾಡಾಗಿದೆ ಕೊಡಗಿನ ಎಮ್ಮೆಮಾಡು. ಇಸ್ಲಾಮಿನ ನವೋತ್ಥಾನ ನಾಯಕರ ತವರೂರಾದ ಈಜಿಪ್ಟಿನ ಮಣ್ಣಿನಲ್ಲಿ ಜನ್ಮತಾಳಿದ ಸೂಫೀ ಶಹೀದ್ (ರ) ರವರು ತಮ್ಮ ಸಹೋದರಿಯೊಂದಿಗೆ (ಅದು ಸಹೋದರಿಯಲ್ಲ ಗುಲಾಮ ಸ್ತ್ರೀಯಾಗಿದ್ದರು ಎಂದೂ ಕೆಲ ಇತಿಹಾ